ಸಾಮಾನ್ಯವಾಗಿ ಎಂದು ಕರೆಯಲ್ಪಡುವ ನಾರ್ತ್ ಅಮೆರಿಕ ವಿಶ್ವ ಕನ್ನಡ ಒಕ್ಕೂಟವು ಉತ್ತರ ಅಮೆರಿಕಾದಲ್ಲಿರುವ ಕನ್ನಡಿಗರ ಸಂಘವಾಗಿದೆ. ಇದು ಫ್ಲೋರಿಡಾದಲ್ಲಿ ಲಾಭಕ್ಕಾಗಿ ನೋಂದಾಯಿಸಲಾದ ಸಂಘವಾಗಿರದೆ ಮಾರ್ಚ್ 2009 ರಲ್ಲಿ, ಯುಗಾದಿ (ಕನ್ನಡ ಹೊಸ ವರ್ಷ) ದಿನದಂದು , ಅಮೆರಿಕದ ಕನ್ನಡ ಕೂಟಗಳ ಸಂಘದ () ಕೆಲವು ಸದಸ್ಯರೊಂದಿಗಿನ ಅಭಿಪ್ರಾಯ ಭೇದಗಳಿಂದ ಮುರಿದುಕೊಂಡಿದ್ದರಿಂದ ಅನ್ನು ರಚಿಸಲಾಯಿತು. == ಇತಿಹಾಸ == ದ ಇತಿಹಾಸವು ಯುನೈಟೆಡ್ ಸ್ಟೇಟ್ಸ್‌ನ ಪ್ರಮುಖ ಕನ್ನಡಿಗ ಸಂಘವಾದ ಅಮೆರಿಕದ ಕನ್ನಡ ಕೂಟಗಳ ಸಂಘ () ದೊಂದಿಗೆ ದ ಇತಿಹಾಸವು ಬೆಸೆದುಕ್ಕೊಂಡಿದೆ. 26 ಮಾರ್ಚ್ 2011 ರಂದು (ಕನ್ನಡ ಹೊಸ ವರ್ಷದ ದಿನ), ದ ಏಳು ಸಂಸ್ಥಾಪಕ ಸದಸ್ಯರು ದಿಂದ ಬೇರ್ಪಟ್ಟುಇತರೇ 25 ಮಂದಿಯೊಂದಿಗೆ ಸೇರಿ ಅನ್ನು ರಚಿಸಿದರು. ಇದು ಪ್ರಪಂಚದಾದ್ಯಂತದ ಕನ್ನಡಿಗರನ್ನು ಒಗ್ಗೂಡಿಸುವ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. == ವಿಶ್ವ ಕನ್ನಡ ಸಮ್ಮೇಳನ 2010 == ಜುಲೈ 2010 ರಲ್ಲಿ, ಕ್ಯಾಲಿಫೋರ್ನಿಯಾದ ಪಸಾಡೆನಾದಲ್ಲಿ ವಿಶ್ವ ಕನ್ನಡ ಶೃಂಗಸಭೆ 2010 ಅನ್ನು ನಡೆಸಿತು. ಕಾರ್ಯಕ್ರಮದ ಉದ್ಘಾಟನೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡ ನಟ ಶಿವರಾಜಕುಮಾರ್, ನಟಿಯರಾದ ಜೆನ್ನಿಫರ್ ಕೊತ್ವಾಲ್ ಮತ್ತು ಶರ್ಮಿಳಾ ಮಾಂಡ್ರೆ ಕೂಡ ಭಾಗವಹಿಸಿದ್ದರು. ನಟ ಗಣೇಶ್ ಅವರು ವೃತ್ತಿಪರ ಕಾರಣಗಳನ್ನು ಉಲ್ಲೇಖಿಸಿ ಸಮ್ಮೇಳನದಲ್ಲಿ ಭಾಗವಹಿಸುವುದನ್ನು ರದ್ದುಗೊಳಿಸಿರುವುದು, ಕರ್ನಾಟಕ ಸರ್ಕಾರ ಒದಗಿಸಿದ ಸೌಲಭ್ಯಗಳ ಬಗ್ಗೆ ಅಸಮಾಧಾನದಿಂದವೆಂದೂ ಹೇಳುತ್ತಾರೆ. ಈ ಸಮ್ಮೇಳನದಲ್ಲಿ ಭಾಗವಹಿಸಲು 48 ಸದಸ್ಯರ ನಿಯೋಗವನ್ನು ಕರ್ನಾಟಕ ಸರ್ಕಾರವು ಕಳುಹಿಸಿತ್ತು..ಸರಿಯಾದ ಆಯ್ಕೆ ಪ್ರಕ್ರಿಯೆಯಿಲ್ಲದೆ ಸರ್ಕಾರವು ನಿರಂಕುಶವಾಗಿ ಆಯ್ಕೆ ಮಾಡಿದ ನಿಯೋಗವನ್ನು ಕಳುಹಿಸಿದನ್ನು ಪ್ರಶ್ನಿಸಿದ ಟೀಕಾಕಾರರು ಸರ್ಕಾರವು ಸಾರ್ವಜನಿಕ ಹಣವನ್ನು ಈ ರೀತಿ ಪೋಲು ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದರು. == ಉಲ್ಲೇಖಗಳು ==